ಅಮ್ಮನ ಕೈತುತ್ತು ತಿಂದ ನೆನಪಿಲ್ಲ
ಹಗಲಿರುಳು ಹೈರಾಣಾಗುವ ಅಮ್ಮನಿಗೆ
ಮಕ್ಕಳ ಹಸಿವೆಯ ಪರಿವೆಯಿರಲಿಲ್ಲ
ಬೆಳೆದಂತೆಲ್ಲ ನನ್ನೊಂದಿಗೆ ಹಠವೂ ಬೆಳೆಯಿತು
ನಾನು ತಿನ್ನುವ ತುತ್ತು ನನ್ನದೇ ಇರಬೇಕು
ಬೆರಳು ಸುಟ್ಟು ಹೆಪ್ಪಳಿಕೆಯೆದ್ದರೂ
ಕತ್ತರಿಸಿ ನೆತ್ತರು ಸೋರಿದರೂ
ನನ್ನ ತುತ್ತ ನಾನೇ ತಿನ್ನುವ ಹಠ
ಕೈತುತ್ತ ಕನಸಾಗಿಯೇ ಉಳಿಸಿತ್ತು
ಸುತ್ತ ಕಂದಮ್ಮಗಳ ಕೂರಿಸಿ ತುತ್ತು
ಕೊಟ್ಟದ್ದಲ್ಲದೇ ತಿಂದ ನೆನಪಿಲ್ಲ
ನಿನಗೊಂದು ಕೈತುತ್ತು ಉಣಿಸಬೇಕಲ್ಲ
ಅವನ ಸಾಲುಗಳಿಗೆ ಹೃದಯವೇ ಕಂಪಿಸಿತು!
ಮುಟ್ಟು ನಿಲ್ಲುವ ಪ್ರಾಯದಲ್ಲಿಯೂ
ಕೆನ್ನೆ ಕೆಂಪೇರಿತು, ಮರುಗಳಿಗೆಯೇ
ಕಣ್ಣಿನಂಚಲೊಂದು ಸಣ್ಣಹನಿ ಜಾರಿತು!
ಕನಸಿದು ನನಸಾಗದೆಂಬುದು
ನಮಗಿಬ್ಬರಿಗೂ ಗೊತ್ತು, ಆದರೂ
ಎಂದಾದರೊಂದು ದಿನ ಅವನ ತಟ್ಟೆಯ ತುತ್ತ
ಜನರರಿಯದಂತೆ ತೆಗೆದು ತಿನ್ನಬೇಕು
ಅವನ ಕೈಸೋಕಿದ ತುತ್ತು ನನ್ನದಾಗಬೇಕು
Friday, January 10, 2020
ಕವಿತೆ
Subscribe to:
Post Comments (Atom)
-
UNCATEGORIZED ಸುಡುವ ಕರಾವಳಿಗೆ ಕರಬೂಜವೊಂದೇ ಪರಿಹಾರ..!! ಸುಧಾ ಆಡುಕಳ ಅವನು ದಿನವೂ ನನಗೆ ಟಾಟಾ ಹೇಳಿ ಕಾಲೇಜಿಗೆ ಹೊರಡುತ್ತಾನೆ. ಸಂಜೆ ಎಲ್ಲರೊಂದಿಗೆ ಮನೆ ಸೇ...
-
ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ...
-
ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು...
No comments:
Post a Comment