೧.Raynuka Nidagundi ಮತ್ತು Purushottama Bilimale ಯವರು ಈ ಕವಿತೆ ಅಮ್ರತಾ ಅವರದ್ದಲ್ಲವೆಂದು ಮೂಲದ ಬಗ್ಗೆ ಅರಿವು ಮೂಡಿಸಿದರು. ಬಾಬುಶಾ ಕೊಯ್ಲಿ ಅವರ ವಸೀಯತ್ ಕವಿತೆ ಇದು.ಅಮ್ರತಾ ಹೆಸರಿನಲ್ಲಿ ವೈರಲ್ ಆಗಿದೆಯಂತೆ.
Govind Raaj. ಅವರ ವಾಲ್ ನಲ್ಲಿ ಅಚಾನಕ್ಕಾಗಿ ಈ ಕವನ ಕಂಡಿತು. ಅನುವಾದಿಸದೇ ಮಲಗಲಾರೆ ಅನಿಸಿ ಒಂದು ಪ್ರಯತ್ನ ಮಾಡಿರುವೆ. ಓದಿ, ಇನ್ನೂ ಸೂಕ್ತವಾಗಿ ನೀವೂ ಅನುವಾದಿಸಿ. ತುಂಬಾ ಒಳ್ಳೆಯ ಕವನ.
Came across the Will of *Amrita Pritam*.... found it so beautiful and meaningful...
only Amrita can pen these lines...Cletus
THE WILL OF AMRITA PRITAM
Fully conscious and in good health, I am writing today my will:
After my death
Ransack my room
Search each item
That is scattered
Unlocked
Everywhere in my house.
Donate my dreams
To all those women
Who between the confines of
The kitchen and the bedroom
Have lost their world
Have forgotten years ago
What it is to dream.
Scatter my laughter
Among the inmates of old-age homes
Whose children
Are lost
To the glittering cities of America.
There are some colours
Lying on my table
With them dye the sari of the girl
Whose border is edged
With the blood of her man
Who wrapped in the tricolor
Was laid to rest last evening.
Give my tears
To all the poets
Every drop
Will birth a poem
I promise.
My honour and my reputation
Are for the woman
Who prostitutes her body
So her daughter can get an education.
Make sure you catch the youth
Of the country, everyone
And inject them
With my indignation
They will need it
Come the revolution.
My ecstasy
Belongs to
That Sufi
Who
Abandoning everything
Has set off in search of God.
Finally,
What’s left
My envy
My greed
My anger
My lies
My selfishness
These
simply
Cremate with me...
Amrita PrPritam
ಸ್ವಸ್ಥಮನಸ್ಕಳಾಗಿ, ಪೂರ್ಣ ಎಚ್ಚರದೊಂದಿಗೆ
ನಾನು ಈ ದಿನ ನನ್ನ ಉಯಿಲನ್ನು ಬರೆಯುತ್ತಿದ್ದೇನೆ
ನನ್ನ ಮರಣದ ನಂತರ
ನನ್ನ ಕೋಣೆಯನ್ನು ಶೋಧಿಸಿರಿ
ಮನೆತುಂಬ ಹರಡಿರುವ
ಎಲ್ಲವನ್ನೂ ಕೊಳ್ಳೆಹೊಡೆಯಿರಿ
ಅಡುಗೆ ಮನೆ, ಶಯನಕೋಣೆಗಳ
ನಡುವನ್ನಷ್ಟೇ ಪ್ರಪಂಚವಾಗಿಸಿಕೊಂಡ
ಎಷ್ಟೋ ಕಾಲದಿಂದ ಕನಸು ಕಾಣುವುದನ್ನೇ ಮರೆತ
ಹೆಂಗಳೆಯರಿಗೆ ನನ್ನ ಕನಸುಗಳನ್ನು ಹಂಚಿಬಿಡಿ
ಝಗಮಗಿಸುವ ಅಮೇರಿಕಾದ ನಗರಗಳಲ್ಲಿ
ತಮ್ಮ ಮಕ್ಕಳನ್ನು ಕಳಕೊಂಡು
ವೃದ್ಧಾಶ್ರಮಗಳಲ್ಲಿ ನೆಲೆಯಾದ
ತಂದೆತಾಯಂದಿರಿಗೆ
ನನ್ನ ನಗುವನ್ನು ಹರಡಿಬಿಡಿ
ಹಾಂ,
ನನ್ನ ಮೇಜಿನ ಮೇಲಿಷ್ಟು ಬಣ್ಣಗಳಿವೆ
ಗಡಿಯನ್ನು ತಮ ರಕ್ತದಿಂದ ತೋಯಿಸಿ
ತ್ರಿವರ್ಣ ವಸ್ತ್ರದಲ್ಲಿ ಶವವಾಗಿ ಮರಳಿದ
ಯೋಧರ ಹೆಂಡಿರ ಸೀರೆಗಳಿಗೆ
ಆ ಬಣ್ಣದಿಂದ ರಂಗುತುಂಬಿ
ನನ್ನ ಕಣ್ಣೀರನ್ನು ಕವಿಗಳಿಗೆ ಕೊಡಿ
ಹನಿಹನಿಯಲ್ಲಿಯೂ
ಕವಿತೆ ಜನ್ಮ ತಳೆಯುತ್ತದೆ
ತಮ್ಮ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ
ಮೈಮಾರಿಕೊಳ್ಳುವ ಹೆಣ್ಣುಗಳಿಗೆ
ನನ್ನ ಗೌರವ ಮತ್ತು ಖ್ಯಾತಿ ಮೀಸಲಿರಲಿ
ದೇಶದ ಎಲ್ಲ ಯುವ ಜನತೆಗೆ
ನನ್ನ ರೋಷವನ್ನು ಚುಚ್ಚುಮದ್ದಾಗಿ ನೀಡಿ
ಕ್ರಾಂತಿಗಾಗಿ ಹೋರಾಡಲು ಇದು ಅಗತ್ಯವಿದೆ
ದೇವರಲ್ಲಿ ಲೀನವಾಗುವ ಉತ್ಕಟತೆಗೆ
ಎಲ್ಲವನ್ನೂ ತೊರೆದಿರುವ
ಸೂಫಿಗಳಿಗೆಂದಿರಲಿ ನನ್ನ ಪರವಶತೆ
ಇನ್ನೇನು ಉಳಿಯುವುದು ಕೊನೆಯಲ್ಲಿ?
ನನ್ನ ಅಸೂಯೆ
ನನ್ನ ಅತಿಯಾಸೆ
ನನ್ನ ಸಿಟ್ಟು
ನನ್ನ ಸುಳ್ಳುಗಳು
ನನ್ನ ಸ್ವಾರ್ಥ
ಇವುಗಳನ್ನೆಲ್ಲ
ನನ್ನೊಂದಿಗೇ ಹುಗಿದುಬಿಡಿ
ಅಮೃತಾ ಪ್ರೀತಂ
೨.
ಆಂಡ್ರೆ ಗಿಬ್ಸನ್ ಬರೆದ ಕವಿತೆ
ಆರೋಗ್ಯ ತಜ್ಞರು
ಆಹಾರ ತಜ್ಞರು ಹೇಳುತ್ತಾರೆ
ನಾನು ಪ್ರತಿದಿನ ಗಡ್ಡೆ ತರಕಾರಿಗಳನ್ನು ತಿನ್ನಬೇಕು
ದಿನಾಲೂ ಹದಿಮೂರು ಗಜ್ಜರಿಗಳನ್ನು ತಿಂದರೆ
ನಿನ್ನ ಕಾಲುಗಳು ನೆಲದಲ್ಲಿ ಬೇರೂರಿ
ತಲೆಯೊಳಗೆ ಕಗ್ಗತ್ತಲ ಲೋಕಗಳು ಸುಳಿಯುವುದಿಲ್ಲ
ಮಂತ್ರವಾದಿ ಹೇಳುತ್ತಾಳೆ,
ನಿನ್ನ ಹೃದಯ ಬಹಳ ಭಾರವಾಗಿದೆ
ಇಪ್ಪತ್ತು ಡಾಲರ್ ಎದುರಿಗಿಡು ಅಷ್ಟೆ
ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ
ಹಣದ ಮುಂದೆ ಅವಳ ಪ್ರೀತಿ ಉಕ್ಕುತ್ತದೆ
"ಚಿಂತಿಸುವುದನ್ನು ಬಿಡು ಅಷ್ಟೆ
ಒಳ್ಳೆಯ ಸಂಗಾತಿ ಜೊತೆಯಾಗುತ್ತಾನೆ"
ಮನೋವೈದ್ಯನ ಸಲಹೆಯ ವಿಧಾನವೇ ಬೇರೆ
ದಿನವೂ ಮೂರು ತಾಸು ಅಲ್ಲಾಡದೇ ಕುಳಿತಿರು
ಕತ್ತಲೆಯ ಕೋಣೆಯಲ್ಲಿ, ಕಣ್ಣು-ಕಿವಿ ಮುಚ್ಚಿರಲಿ
ಅದನ್ನೂ ಪ್ರಯತ್ನಿಸಿದೆ, ಕಣ್ಣು-ಕಿವಿ ಮುಚ್ಚಿದರೂ...
ಯೋಚನೆಗಳನ್ನು ನಿಲ್ಲಿಸಲಾಗಲಿಲ್ಲ
ಅವು ಮತ್ತೆ ಮತ್ತೆ ಕೇಳುತ್ತಿದ್ದವು
ಕತ್ತಲೆಯಲಿ ನಿರ್ವೀರ್ಯನಾಗಿ ಕುಳಿತು ಸಾಧಿಸುವುದೇನು?
ಯೋಗಿ ಹೇಳಿದ, ಎಲ್ಲವನ್ನೂ ಸಡಿಲಬಿಡು,
ಆದರೆ ಸತ್ಯವನ್ನು?
ನಿಶ್ವಾಸದ ಮೇಲಿರಲಿ ನಿನ್ನ ಗಮನ
ಪಡೆಯುವುದಕ್ಕಿಂತ ಕೊಡುವುದರಲ್ಲಿದೆ ಸುಖ
ವೈದ್ಯನೋ ಮಾತ್ರೆಗಳ ಪಟ್ಟಿಯನ್ನೇ ನೀಡಿದ
ಲೆಕ್ಸಾಪ್ರೋ, ಲ್ಯಾಮಿಕ್ಯಾಟ್ ಐ, ಲೀಥಿಯಂ, ಕ್ಸೆನಾಕ್ಸ....
ಇವೆಲ್ಲವನು ತಿಂದು ಒತ್ತಡರಹಿತನಾಗಿರ
ಆಘಾತ ತಂತಾನೇ ಮರೆತುಹೋಗುವುದು
ಆ ಆಘಾತ ಹೇಳಿತು,
ನೀನು ಪದ್ಯಗಳನ್ನು ಬರೆಯಬೇಡ
ನಿನ್ನೊಳಗೆ ಮಡುಗಟ್ಟಿದ ನೋವಿಗೆ
ಪದಗಳ ರೂಪ ನೀಡಿದರೂ ಯಾರೂ ಇಲ್ಲವಿಲ್ಲಿ ಸಂತೈಸಲು
ಆದರೆ ನನ್ನೊಳಗಿನ ನೋವು ಹೇಳುತ್ತದೆ,
ತೀರ ಏಕಾಂಗಿಯೆಂದು ಅರಿವಾಗಿ
ಟೈಲರ್ ಕ್ಲೆಮೆಂಟಿ ಜಾರ್ಜ್ ಅವರು ವಾಷಿಂಗ್ಟನ್ ಸೇತುವೆಯಿಂದ ಹುಂಡ್ಸನ್ ನದಿಗೆ ಹಾರಿದರು
ನನ್ನೊಳಗು ಹೇಳುತ್ತದೆ,
"ಕವಿತೆ ಬರೆ"
೩.
ಹೀಗೊಂದು ರೂಮಿ ಓದು
ಈ ದೇಹವೇ ಒಂದು ಅತಿಥಿಗೃಹ
ದಿನ ಬೆಳಗಾದರಿಲ್ಲಿ ಹೊಸ ಹೊಸ ಅತಿಥಿಗಳು
ಸಂತೋಷ, ಖಿನ್ನತೆ, ಸಣ್ಣತನ
ಆ ಕ್ಷಣದ ಉದ್ವಿಗ್ನತೆಗಳು...
ಬಯಸದೇ ಬರುವ ಅತಿಥಿಗಳು
ಎಲ್ಲರನ್ನೂ ಸ್ವಾಗತಿಸಿ, ರಂಜಿಸಿ
ದುಃಖವಂತೂ ಗುಂಪಾಗಿಯೇ ಬರುವ ಅತಿಥಿ
ಆದರೂ ಪ್ರೀತಿಯಿಂದ ಸ್ವಾಗತಿಸಿ
ಅವು ಮನೆಯನ್ನು ಗುಡಿಸಿ,
ಗುಂಡಾಂತರವೆಬ್ಬಿಸಿದರೂ....
ಪೀಠೋಪಕರಣಗಳನ್ನೆಲ್ಲ ಮುರಿದು ಚೆಲ್ಲಿದರೂ
ಗೌರವಿಸಿ, ಪ್ರೀತಿಸಿ..
ಖಾಲಿಯಾದ ಜಾಗಕ್ಕೆ ಹೊಸಗಾಳಿ ಬರುವುದು
ನೆನಪಿರಲಿ ನಿಮಗೆ...
ದುಷ್ಟತನ, ದ್ವೇಷ, ನಿಂದನೆ...
ಎಲ್ಲರೂ ನಮ್ಮ ಅತಿಥಿಗಳೆ
ಬಾಗಿಲಲ್ಲಿ ನಿಂತು, ನಗುತ್ತಾ ಸ್ವಾಗತಿಸಿ
ಅತಿಥಿಗಳಿಗೆಂದೂ ಆಭಾರಿಯಾಗಿರಿ
ದೂರದಿಂದ ಬಂದ ಅವರೆಲ್ಲರೂ
ನಿಮ್ಮ ಬಾಳಿಗೆ ಮಾರ್ಗದರ್ಶಕರು...
೪.
ಅರಾಸಿಲಿಸ್ ಗಿರ್ ಮೇ ಅವರ ಕವನ
ಮೂರನೇ ಕ್ಲಾಸಿನ ಪುಟ್ಟಿ ನೀಡಿದ ಶುಭಾಶಯ ಪತ್ರ
ಅದು ಒಂದು ಜೂನ್ ತಿಂಗಳ ಬೆಳಗು
ನಾನು ಶಾಲೆಯ ಅಂಗಗಳದಲ್ಲಿದ್ದೆ
ಮೂರನೇ ಕ್ಲಾಸಿನ ಪುಟ್ಟಿ
ಶುಭಾಶಯ ಪತ್ರವೊಂದನ್ನು ನೀಡಿ ಮರೆಯಾದಳು
ಅಂಟಿಸಿದ ಪತ್ರವನು ಜಾಗ್ರತೆಯಾಗಿ ತೆರೆದೆ
ಕಣ್ಮುಂದೆ ಚಿತ್ರಗಳು ಹರಡಿಕೊಂಡವು
ಕೇಸರಿ ಗೆರೆಯ ಮೇಲೊಂದು ಆನೆ
ಮೇಲಿರುವ ಹಳದಿ ವೃತ್ತ ಖಂಡಿತ ಸೂರ್ಯನೆ
ಆರು ಹಸಿರು ನೇರ ಗೆರೆಗಳು
ತುದಿಗಂಟಿದ ಬಣ್ಣ ಅರಳಿದ ಹೂಗಳು!
ಆಕಾಶದ ತುಂಬೆಲ್ಲ ಹಾರುವ ಹಕ್ಕಿಗಳು
ಕೆಳಗಿತ್ತು ಒಂದು ಉದ್ದವಾದ ಪದ
ಎಲರರನ ಪಿರಿಸುರಿರಿ...
ಮೂಲೆಯಲ್ಲವಳ ಮುದ್ದಾದ ಹೆಸರು
ಎಲ್ಲ ತಿಳಿಯಿತು
ಆ ಪದದ ಅರ್ಥವೊಂದನ್ನುಳಿದು
ಯೋಚಿಸತೊಡಗಿದೆ ಏನರ್ಥವಿರಬಹುದು?
ಯಾವುದೋ ಹೂವಿನ ವೈಜ್ಞಾನಿಕ ಹೆಸರೆನಿಸಿತು ಮೊದಲು
ಪ್ರಾಣಿಯ ಹೆಸರೂ ಆಗಿರಬಹುದೇನೊ ಅನಿಸಿತು ಆಮೇಲೆ
ಮತ್ತೆ, ಮತ್ತೆ ಓದತೊಡಗಿದೆ
ಹಿಂದೆ, ಮುಂದೆ, ತಿರುಗಿಸಿ, ನೇರ
ಮನದಲ್ಲೆ, ಮತ್ತೆ ಜೋರಾಗಿ
ಎಲರರನ ಪಿರಿಸುರಿರಿ.....
ಅರ್ಥವಾಗಲಿಲ್ಲ ಮತ್ತೆಯೂ..
ವಾಕ್ಯದೊಳಗಿಟ್ಟು ಹುಡುಕತೊಡಗಿದೆ ಪದವ
"ಮನೆಗೆ ಮರಳಬೇಕಿದೆ ಈಗಲೆ
ನಾನು ಎಲರರನ ಪಿರಿಸುರಿರಿ ಮರೆತುಬಂದೆ"
ಅಥವಾ,
"ಮಳೆಗಿಂತ ಖುಶಿ ಬೇರಿಲ್ಲ
ತಣ್ಣಗೆ ಸುರಿವಾಗ ಕಿಟಕಿ ತೆರೆದಿಟ್ಟು
ಲೋಟತುಂಬ ಎಲರರನ ಪಿರಿಸುರಿರಿ ಕುಡಿಯುತ್ತಿದ್ದರೆ.... "
ಅಥವಾ,
"ಆಗುಂಬೆಗೆ ಹೋಗೋಣವೇನು?
ವಾಹನ ನಾವು ಚಲಾಯಿಸೋಣವೆ ಅಥವಾ ಎಲರರನ ಪಿರಿಸುರಿರಿ ಕರೆಯಲೆ?"
ಊಹೂಂ....
ಏನು ಮಾಡಿದರೂ ಅರ್ಥ ಹೊಳೆಯದು
ಪತ್ರ ಮುಚ್ಚಿಟ್ಟು ಕೆಲಸಗಳಲಿ ಮುಳುಗಿಹೋದೆ
ವರ್ಷದ ಕೊನೆಗೆ ಬರೆಯಬೇಕಿತ್ತು ಪತ್ರ
ಎಲ್ಲ ವಿದ್ಯಾರ್ಥಿಗಳಿಗೂ...
ಪುಟ್ಟಿಗೂ ಬರೆದೆ
ಮತ್ತದೇ ಪದ ಕಣ್ಮುಂದೆ ನಿಂತಿತು
ಮುದ್ದು ಪುಟ್ಟಿ,
ವರ್ಷದ ಆರಂಭದಲಿ ನೀ ನೀಡಿದ ಪತ್ರ
ಎಷ್ಟು ಚಂದವಿದೆ ನೀ ಬಿಡಿಸಿದ ಚಿತ್ರ
ಕೊನೆಗುಳಿಯಿತು ಕಂದಾ ಒಂದು ಪ್ರಶ್ನೆ
ಎಲರರನ ಪಿರಿಸುರಿರಿ ಎಂದರೇನೆ?
ನಾ ಬರೆದ ಆ ಪದವ ಮತ್ತೆ ಉಚ್ಛರಿಸಿದೆ
ಅರೆ! ಏನೋ ಅರ್ಥ ಹೊಳೆಯುತ್ತಿದೆ!
ಎಲರರನ ಪಿರಿಸುರಿರಿ
ಎಲ್ಲರನೂ ಪಿರಿಸುರಿರಿ
ಎಲ್ಲರನ್ನೂ ಪ್ರೀತಿಸುತ್ತಿರಿ
ಪ್ರೀತಿಸುತ್ತಿರಿ ಎಲ್ಲರನ್ನೂ
ಪ್ರೀತಿಸಿರಿ ಎಲ್ಲರನ್ನೂ
ಎಲ್ಲರಿಗೂ ಪ್ರೀತಿ
ಪ್ರೀತಿಯೇ ಎಲ್ಲರೂ
ಎಲ್ಲರೂ ಪ್ರೀತಿ
ಪ್ರೀತಿ, ಪ್ರೀತಿ, ಪ್ರೀತಿ..
ಎಲ್ಲರನ್ನೂ ಪ್ರೀತಿಸುವುದೇ ಪ್ರೀತಿ
ಎಲ್ಲರನ್ನೂ ಪ್ರೀತಿಸಿರಿ
ಹೌದು,
ಎಲ್ಲರನ್ನೂ ಪ್ರೀತಿಸಿರಿ
೫.
ಬ್ರೆಂಡನ್ ಕಾನ್ಸ್ಟೆಂಟೈನ್ ಅವರ ಕವಿತೆ
ಬಂದೂಕಿನ ವಿರುದ್ಧ ಪದ
ಆ ದಿನದ ತರಗತಿಯ ಪಾಠ
ವಿರುದ್ಧ ಪದಗಳನು ಹುಡುಕುವ ಆಟ
ಎಮಿಲಿ ಡಿಕನ್ಸನ್ ನ ವಾಕ್ಯವೊಂದು ಅದಕೆ ಸರಕಾಯಿತು
"ನನ್ನ ಬದುಕು ಗುಂಡು ತುಂಬಿದ ಬಂದೂಕಿನೆದುರಿಗಿತ್ತು"
ವಾಕ್ಯದ ಪದಗಳೊಂದಿಗೆ ಆಟ ಶುರುವಾಯಿತು
ನನ್ನ - ನಿನ್ನ
ಬದುಕು - ಸಾವು
ತುಂಬಿದ - ಖಾಲಿಯಾದ
ಬಂದೂಕು.......
ಬಂದೂಕು !!!!?????
ಮಿಂಚಿನ ನಂತರದ ಮೌನ
ಮತ್ತೆ ಸಿಡಿಲಿನಂತೆ ಆರ್ಭಟ
ಪದಗಳ ಮಳೆ ಸುರಿಯತೊಡಗಿತು
ಹೂವು ಎಂದ ಒಬ್ಬ,
ಅಲ್ಲ ಪುಸ್ತಕ ಎಂದ ಇನ್ನೊಬ್ಬ,
ಅರೆ! ಮೂರ್ಖ, ಪುಸ್ತಕವಂತೂ ಅಲ್ಲವೇ ಅಲ್ಲ
ಹಗುರಾದ ಹಕ್ಕಿಯ ಗರಿ,
ಅಥವಾ ಪ್ರೀತಿಯ ಅಪ್ಪುಗೆ
ಹೀಗೆ ಪದಗಳ ಮಳೆ ಸುರಿದವು
ಯಾರ ಮಾತೂ ಯಾರಿಗೂ ಕೇಳದಾಯಿತು
ಅವರವರ ಉತ್ತರವೇ ಅವರಿಗೆ ಸರಿಯೆನಿಸಿತು
ಪ್ರಾರ್ಥನೆ, ಮದುವೆಯ ಉಂಗುರದಂಥ ಉಡುಗೊರೆ,
ಮುಗ್ದ ಮಗುವಿನ ನಗೆ, ಸೂಲಗಿತ್ತಿಯ ಕರುಣೆ,
ಪಿಸುಮಾತು, ನಕ್ಷತ್ರ,
ಅಂಗೈಯ್ಯನೊತ್ತಿ ಕಿವಿಯೊಳಗುಸಿರಿದ ಮಾತು
ಅರೆ! ಸಿನಿಕರಾಗಬೇಡಿ,
ಚುನಾವಣೆಗೆ ಗೆಲ್ಲಬೇಕಿದೆಯೇನು ನಿಮಗೆ?
ಕೋವಿಯ ವಿರುದ್ಧ ಪದ ಮುದ್ದು ಗೊಂಬೆ,
ಅಲ್ಲ ಖಡ್ಗ, ಅಲ್ಲಲ್ಲ ಒಂದು ಸಿಹಿಯಾದ ಹಣ್ಣು
ಅಲ್ಲವೇ ಅಲ್ಲ ಹೂವೇ ಸರಿ
ಒಂದು ಬಿಳಿಯ ಹೂವು,
ಅಥವಾ ಒಂದಿಡೀ ಹೂದೋಟ
ಹೀಗೆ ಜಗಳದಲ್ಲಿ ಗಂಟೆಯಾಯಿತು
ಮಕ್ಕಳು ಹೇಳಿದ್ದೆಲ್ಲ ಕರಿಹಲಗೆಯಲ್ಲಿ ದಾಖಲಾಗಿತ್ತು
ಒರೆಸಹೋದರೆ ಕಿರುಚಿದಳು ಹುಡುಗಿ
ತೀರ್ಮಾನವಾಗಿಲ್ಲ, ಕೊಂಚ ನಿಲ್ಲಿ
ಪದಗಳನು ಬಿಟ್ಟು ಹೊರಟೆ ಹೊರಗೆ
ಮಾಯವಾಗಿತ್ತು ಎಲ್ಲರ ಮುಖದ ಮುಗುಳುನಗೆ
ಮರುದಿನ....
ತರಗತಿಯಲ್ಲೇ ಅನೇಕ ಪಕ್ಷ
ಹೂವು, ಮುದ್ದು ಬೆಕ್ಕಿನ ಮರಿ,
ಮಂಜುಗಡ್ಡೆಯ ಚಂಡು...
ಹೀಗೆ....ಹೀಗೆ.. ಥರಾವರಿ ಗುಂಪು
ಗುಂಪಿಗೆ ಸೇರದವರು
ಬಂದೂಕಿನ ವಿರುದ್ಧ
ಕವನ ಬರೆಯುತ್ತಿದ್ದರು
ಅದೊಂದು ಅಮೂಲ್ಯ ರತ್ನ, ಚಂದದ ನೃತ್ಯ
ನಮ್ಮೂರಿನ ವಸ್ತು ಸಂಗ್ರಹಾಲಯ
ಸಂಗೀತದ ಲಯ, ಕೇಳುವ ಹೃದಯ
ಮತ್ತೆ ಗೊಂದಲ, ಮತ್ತೆರಡು ಪಕ್ಷಗಳ ಉದಯ
ಸಹಿಸಲಾರದೇ ಹೇಳಿದೆ ನಾನು
ನೀವೆಲ್ಲರು ಹೇಳುವುದೂ ಸರಿಯಿದೆ
ಬಂದೂಕಿನ ವಿರುದ್ಧ ಪದ
ಉಳಿದೆಲ್ಲ ಪದ, ಉಳಿಯದ ಪದ
ಪದಗಳ ನಡುವಿನ ಖಾಲಿ ಜಾಗ,
ಈ ಕೋಣೆ, ಕೋಣೆಯಾಚೆಗಿನ ಆಕಾಶ,
ಓಣಿ, ಊರು, ಪೇಟೆ, ಬೀದಿ, ಅವಕಾಶ
ಆಸ್ಪತ್ರೆಯಲಿ ಕಾಯುವ ಕಣ್ಣು,
ಅಂಚೆಕಚೇರಿಯ ತೆರೆಯದ ಪತ್ರ,
ಹೀಗೆ ಎಲ್ಲವೂ.... ಎಲ್ಲರೂ...
ಕೋವಿಯ ವಿರುದ್ಧ ಪದ
ಅದು ಗುರಿಯಿಡುವ ಎಲ್ಲವೂ...
ಎಲ್ಲರೊಂದಾಗಿ ಹೇಳಿದರು
ಇದನ್ನು ಪದವಾಗಿ ಬರೆಯಲಾಗದು
ಕವಿತೆಯಾಗಿ ಹಾಡಬಹುದು
ಏಕೆಂದರೆ,
ಸಾವೆಂದರೆ ಹಾಡದ ಸಾಲು, ಸಾಲು ಕವಿತೆ....
೬.
ಮಗ ಓದಿದ ಶೇಕ್ಸಪಿಯರ್ ನ ಕವಿತೆ
ಇಡಿಯ ಜಗವೇ ಒಂದು ನಾಟಕಶಾಲೆ
ಜನರೆಲ್ಲರೂ ಪಾತ್ರಧಾರಿಗಳು
ಒಬ್ಬ ನಟನಿಗಿಲ್ಲಿ ಏಳು ಪಾತ್ರಗಳು!
ಮೊದಲ ದೃಶ್ಯದಲ್ಲವನು ಅಮ್ಮನ
ಕಂಕುಳಲ್ಲಿ ಇಣುಕುವ ಪುಟ್ಟ ಮಗು
ಮುಂದೆ ಶಾಲೆಗೆ ಹೋಗೆನೆಂದು
ಹಠಹಿಡಿವ ಹೊಳಪುಕಂಗಳ ಹುಡುಗ
ಮತ್ತೆ ಜ್ವಲಿಸುವ ಅಮರ ಪ್ರೇಮಿ!
ದೃಶ್ಯ ಬದಲಾದಾಗವನು ವೀರ ಸೈನಿಕ
ಪದಕದ ಗೌರವಕ್ಕಾಗಿ ಗುಂಡಿಗೆಯನ್ನೇ
ತೋಪಿಗೊಡ್ಡಬಲ್ಲ ತ್ಯಾಗಮಯಿ!
ನಂತರಡೊಳ್ಳುಹೊಟ್ಟೆಯ ನ್ಯಾಯಾಧೀಶ
ಬುದ್ದಿಜೀವಿಯ ಕಳೆಯುಳ್ಳ ಸಭ್ಯಸ್ಥ
ಆರನೆಯ ಪಾತ್ರದಲಿ ನಡುಬಗ್ಗಿದ ವೃದ್ದ
ಕೊನೆಯಲ್ಲಿ ಬೊಚ್ಚುಬಾಯಗಲಿಸಿ
ನಗುವ ಮಗು, ಮತ್ತೆ ಎರಡನೆ ಬಾಲ್ಯ!
೭.
"ಈ ದೇವಾಲಯದಲ್ಲಿ ದೇವರಿಲ್ಲ"
ನುಡಿದ ಸಂತ ವಿಷಾದದಲ್ಲಿ
ದೊರೆಯು ಕೋಪದಿ ನುಡಿದ,
"ಶುದ್ಧ ನಾಸ್ತಿಕ ನೀನು! ಏನು ಬೊಗಳಿದೆ ಹೇಳು?
ಹೊನ್ನ ಪೀಠದ ಮೇಲೆ, ರತ್ನ ಸಿಂಹಾಸನದಿ
ಶೋಭಿಸುವ ದೇವ ನಿನಗೆ ಕಾಣನೇನು?"
ಮತ್ತದೇ ಶಾಂತ ನಗೆ ಸೂಸುತ್ತ ಸಂತನೆಂದ,
"ಖಾಲಿಯಾಗಿದೆ ಪೀಠ, ದೇವರಿಲ್ಲ
ನಿನ್ನ ಗರ್ವದ ಮೂರ್ತಿ ಕಾಣುತಿದೆಯಲ್ಲ"
ಹುಬ್ಬು ಗಂಟಿಕ್ಕಿ ನುಡಿದ ಅರಸ,
"ಆಗಸವ ಚುಂಬಿಸಿವೆ ನಾಣ್ಯಗಳ ಪ್ರೋಕ್ಷಣೆ,
ಸಾಂಗವಾಗಿವೆ ಪೂಜೆ, ಸಮರ್ಪಣೆ
ಇಷ್ಟಾದ ಮೇಲೆಯೂ ದೇವರಿಲ್ಲವೆಂದರೆ......"
ಸಂತ ತಣ್ಣಗೆ ನುಡಿದ, "ಈ ವರ್ಷ ಭೀಕರ ಬರ
ಮಿಲಿಯಗಟ್ಟಲೆ ಜನರು ಬಾಗಿಲಿಗೆ ಬಂದು
ಅನ್ನ ವಸತಿಗಾಗಿ ಮೊರೆಯಿಟ್ಟರು ಅಂದು
ಬರಿಗೈಲಿ ನಡೆದರು ಕಾಡ ದಾರಿಯಲಿ
ಆಶ್ರಯವ ಪಡೆದಿಹರು ಪಾಳು ಗುಡಿ, ಗುಹೆಗಳಲಿ
ಹೊಟ್ಟೆಗಿಲ್ಲದೆ ನರಳುತಿರುವವರ ನಡುವೆ
ದೇವ ನಿಂತು ನುಡಿದುದ ಕೇಳಿಸಿಕೊಂಡಿರುವೆ
ಇಡಿಯ ವ್ಯೋಮದ ಬೆಳಕು ನನ್ನ ಮನೆ
ಮನೆಯ ಪಂಚಾಂಗಕ್ಕೆ ಮೌಲ್ಯಗಳೆ ಕಲ್ಲು
ಸತ್ಯ, ಶಾಂತಿ, ಸಹಾನುಭೂತಿ ಮತ್ತು ಪ್ರೀತಿ
ಮನೆಯಿಲ್ಲದವರಿಗೆ ನೆರಳಾಗದಾ ದೊರೆಯು
ನನ್ನ ಬಂಧಿಸಲಾರ ಝಗಮಗಿಸುವ ಗುಡಿಯೊಳಗೆ
ದೇವ ಹೊರಟುದ ಕಂಡೆ ಬಡವರಾ ಜೊತೆಗೆ
ನೀರಗುಳ್ಳೆಯಂತೆ ಖಾಲಿ ನಿನ್ನ ಗುಡಿ ಒಳಗೆ"
ಕ್ರೋಧವುಕ್ಕೇರಿ ಕಿರಿಚಿದಾ ದೊರೆಯು,
"ಒಂದರಗಳಿಗೆ ನಿಲ್ಲದೇ ಇಲ್ಲಿಂದ ತೊಲಗು!"
ಸಂತ ನಡೆದನು ಮಾತ ಹೇಳಿ ಕೊನೆಗೆ,
"ದೈವಿಕತೆಯ ಭ್ರಷ್ಟಗೊಳಿಸಿದಾಗಲೇ ನೀನು
ದೈವಭಕ್ತರನೂ ಭ್ರಷ್ಟಗೊಳಿಸಿರುವೆ ಬಿಡು"
ಸಂತ ನಡೆದನು ದೇವನಿರುವ ಎಡೆಗೆ
೮.
ಸ್ನೇಹಿತರೇ,
ಅನುವಾದ ಅಭಿಯಾನ ಮುಂದುವರೆಸೋಣ...
ನಿನ್ನೆ ನಾನು ಕುಶಲಿಯಾಗಿದ್ದೆ
ಜಗವ ಬದಲಿಸಬೇಕೆಂದಿದ್ದೆ
ಇಂದು ನಾನು ವಿವೇಕಿಯಾಗಿದ್ದೇನೆ
ನಾನೇ ಬದಲಾಗಬೇಕೆಂದಿದ್ದೇನೆ
-ರೂಮಿ
ಬ್ರೆಕ್ಟ್ ಕವಿತೆ
ಎಲ್ಲವೂ ಬದಲಾಗುತ್ತದೆ
ನಿನ್ನ ಕೊನೆಯ ಉಸಿರಿನವರೆಗೂ
ಹೊಸದಾರಿ ತೆರೆಯುತ್ತದೆ
ಆದರೆ,
ಏನಾಗಿದೆಯೋ ಅದು ಆಗಿಹೋಗಿದೆ
ಸೆರೆಗೆ ಬೆರೆಸಿದ ನೀರು ಮತ್ತೆ ಹೊರಳದು
ಏನಾಗಿದೆಯೋ ಅದು ಆಗಿಹೋಗಿದೆ
ಸೆರೆಗೆ ಬೆರೆಸಿದ ನೀರು ಮತ್ತೆ ಹೊರಳದು
ಆದರೆ,
ಇಲ್ಲಿ ಎಲ್ಲವೂ ಬದಲಾಗುತ್ತದೆ
ನಿನ್ನ ಕೊನೆಯ ಉಸಿರಿನವರೆಗೂ
ಹೊಸದಾರಿ ತೆರೆಯುತ್ತದೆ...
*ಒಮ್ಮೆ ಓದಿ, ಕವನದುದ್ದಕ್ಕೂ ನಾವೇ ಓಡಾಡಿದಂತಾಗಿ, ಕಣ್ಣುಗಳು ಮಂಜಾಗುತ್ತವೆ!*
Heart touching Poem by Ram Jethmalani.
————————————
ಕನ್ನಡಾನುವಾದದ ವಿನಮ್ರ ಪ್ರಯತ್ನ....
ಕೆಲವೊಮ್ಮೆ ರಾತ್ತಿಯ ಕತ್ತಲಲ್ಲಿ
ನಾನು ನನ್ನ ಆತ್ಮಸಾಕ್ಷಿಯನ್ನು ಸ್ಪರ್ಶಿಸುತ್ತೇನೆ
ಅದು ಇನ್ನೂ ಉಸಿರಾಡುತ್ತಿದೆಯೇ?
ದಿನದಿಂದ ದಿನಕ್ಕದು ನಿಧಾನ ಸಾಯುತ್ತಿದೆ....
ನಾನೊಂದು ಐಷಾರಾಮಿ ಹೋಟೇಲಿನಲ್ಲಿ ಸುಗ್ರಾಸ ಭೋಜನಕ್ಕಾಗಿ ಕಾದಿರುವಾಗ
ನನಗೆ ನೆನಪಾಗುತ್ತದೆ ಅದರ ಬೆಲೆ ಬಾಗಿಲು ಕಾಯುವನ ಒಂದು ತಿಂಗಳ ಸಂಬಳಕ್ಕೆ ಸಮ
ಥಟ್ಟನೆ ನಾನು ದೂರ ಸರಿಯಬೇಕೆನಿಸುತ್ತದೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ....
ನಾನು ವ್ಯಾಪಾರಿಯಲ್ಲಿ ತರಕಾರಿ ಖರೀದಿಸುವಾಗ
ಅವನ ಪುಟ್ಟಮಗ ಚೋಟು ಪೊಟಾಟೋ ತೂಕ ಮಾಡುತ್ತಿರುತ್ತಾನೆ
ಚೋಟು ಶಾಲೆಯಲ್ಲಿರಬೇಕಾದ ವಯಸ್ಸಿನ ಹುಡುಗ
ನಾನು ಬೇರೆ ದಾರಿ ಹಿಡಿಯುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ...
ನಾನು ಚಂದದ ಉಡುಪುಗಳನ್ನುಹೊಲಿಸುತ್ತಿರುವಾಗ
ಅವು ದುಬಾರಿಯವೂ ಕೂಡಾ ಆಗಿರುತ್ತವೆ
ಅಗೊಬ್ಬಳು ಹೆಂಗಸು ಕಾಣಿಸುತ್ತಾಳೆ
ತನ್ನ ಚಿಂದಿ ಬಟ್ಟೆಯಲ್ಲಿ ಮೈಮುಚ್ಚಿಕೊಳ್ಳಲು ಹೆಣಗುತ್ತಾ
ನಾನು ನನ್ನ ಕಿಟಕಿಯನ್ನು ಮುಚ್ಚುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ...
ನಾನು ನನ್ನ ಮಕ್ಕಳಿಗೆ ದುಬಾರಿ ಆಟಿಗೆಗಳನ್ನು ಕೊಳ್ಳುವಾಗ
ದಾರಿಯಲ್ಲಿ ಹರಿದ ಬಟ್ಟೆಯ ಮಕ್ಕಳನ್ನು ನೋಡುತ್ತೇನೆ
ಖಾಲಿ ಹೊಟ್ಟೆ, ಹಸಿದ ಕಣ್ಣುಗಳೊಡನೆ
ಕೆಂಪು ದೀಪಗಳಡಿಯಲ್ಲಿ ಆಟಿಗೆಗಳ ಮಾರುತ್ತಾ
ನಾನು ನನ್ನ ಆತ್ಮಸಾಕ್ಷಿಯನ್ನು ಜೀವಂತವಾಗಿಡಲು ಕೆಲವನ್ನು ಖರೀದಿಸುತ್ತೇನೆ ಅವರಿಂದಲೂ
ಆದರೂ ಅದು ಕೊಂಚ ಸಾಯುತ್ತದೆ....
ನನ್ನ ಮನೆಯ ಕೆಲಸದವಳು ಹುಷಾರಿಲ್ಲವೆಂದು ಮಗಳನ್ನು ಕಳಿಸುತ್ತಾಳೆ
ಶಾಲೆಗೆ ರಜೆ ಮಾಡಿಸಿ
ಬೇಡವೆಂದು ಹೇಳಿ ಮರಳಿ ಕಳಿಸಬೇಕೆಂದುಕೊಳ್ಳುವಾಗಲೇ
ಸಿಂಕಿನಲ್ಲಿ ತುಂಬಿರುವ ಪಾತ್ರೆಗಳು ಮತ್ತು ಕೊಳೆಬಟ್ಟೆಗಳು ನೆನಪಾಗುತ್ತವೆ
ನಾಲ್ಕಾರು ದಿನಗಳಿಗಲ್ಲವೆ ಸಮಜಾಯಿಸಿ ಕೊಟ್ಟುಕೊಳ್ಳುತ್ತೇನೆ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ...
ಮಗುವೊಂದರ ರೇಪ್ ಅಥವಾ ಕೊಲೆಯಾದ ಸುದ್ಧಿ ಕೇಳಿದಾಗ
ಬೇಸರವಾಗುತ್ತದೆ.. ನನ್ನ ಮಗುವಲ್ಲವಲ್ಲ! ಕೊಂಚ ಸಮಾಧಾನವೂ
ಕನ್ನಡಿಯಲ್ಲಿ ಮುಖ ನೋಡಲಾರೆ ನಾನು
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ...
ಜನರೆಲ್ಲ ತಮ್ಮ ಧರ್ಮ, ಜನಾಂಗ, ಜಾತಿಗಾಗಿ ಹೋರಾಡುವಾಗ
ನನ್ನ ದೇಶ ವಿನಾಶದ ಅಂಚಿಗೆ ಸಾಗುತ್ತಿದೆ ಎಂದು ಹೇಳುತ್ತೇನೆ
ಎಲ್ಲದಕ್ಕೂ ಭ್ರಷ್ಟ ರಾಜಕಾರಣಿಗಳನ್ನು ಹೊಣೆಮಾಡಿ ಹಗುರಾಗುವಾಗ
ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ...
ನನ್ನ ಇಡಿಯ ಪಟ್ಟಣವೇ ಉಸಿರುಗಟ್ಟುತ್ತಿರುವಾಗ
ಹೊಗೆ ತುಂಬಿ ಉಸಿರಾಡಲು ಹೆಣಗುತ್ತಿರುವಾಗ
ನನ್ನ ಕಾರು ಮಾತ್ರ ದಿನವೂ ಸವಾರಿ ಹೊರಡುತ್ತದೆ
ಸಮೂಹ ಸಾರಿಗೆ ಬಳಸಬೇಕೆನಿಸಿದರೂ...
ಒಂದು ಕಾರಿನಿಂದೇನು ಮಹಾ ಮಾಲಿನ್ಯವಾದೀತು ಎನ್ನತ್ತಲೇ
ನನ್ನ ಆತ್ಮಸಾಕ್ಷಿ ಕೊಂಚವೇ ಸಾಯುತ್ತದೆ....
ಹೀಗಾಗಿ...
ರಾತ್ರಿಯ ಕತ್ತಲೆಯಲ್ಲಿ ನನ್ನ ಆತ್ಮಸಾಕ್ಷಿಯನು ಸ್ಪರ್ಶಿಸಿದಾಗ
ಅದು ಇನ್ನೂ ಉಸಿರಾಡುತ್ತಿರುವುದೇ ಅಚ್ಛರಿಯೆನಿಸುತ್ತದೆ!
ಯಾಕೆಂದರೆ....
ನಾನೇ ನನ್ನ ಕೈಯ್ಯಾರೆ ಅದನ್ನು ಇಂಚಿಂಚಾಗಿ ಕೊಲ್ಲುತ್ತಿರುತ್ತೇನೆ..
ಸಮಾಧಿ ಮಾಡುತ್ತಿರುತ್ತೇನೆ... !
😔
Sometimes in the dark of the night,
I visit my conscience
To see if it is still breathing,
For its dying a slow death
Every day.
When I pay for a meal in a fancy place.
An amount which is perhaps the monthly income
Of the guard who holds the door open.
And quickly I shrug away that thought,
It dies a little.
When I buy vegetables from the vendor,
And his son "chhotu" smilingly weighs the potatoes,
Chhotu, a small child, who should be studying at school.
I look the other way
It dies a little.
When I am decked up in a designer dress,
A dress that cost a bomb
And I see a woman at the crossing,
In tatters,trying unsuccessfully to save her dignity.
And I immediately roll up my window.
It dies a little.
When I buy expensive gifts for my children,
On return, I see half clad children,
With empty stomach and hungry eyes,
Selling toys at red light
I try to save my conscience by buying some, yet
It dies a little.
When my sick maid sends her daughter to work,
Making her bunk school
I know I should tell her to go back.
But I look at the loaded sink and dirty dishes,
And I tell myself that is just for a couple of days
It dies a little.
When I hear about a rape
or a murder of a child,
I feel sad, yet a little thankful that it's not my child.
I can not look at myself in the mirror,
It dies a little.
When people fight over caste creed and religion.
I feel hurt and helpless
I tell myself that my country is going to the dogs,
I blame the corrupt politicians,
Absolving myself of all responsibilities
It dies a little.
When my city is choked.
Breathing is dangerous in the smog ridden metropolis,
I take my car to work daily ,
Not taking the metro,not trying car pool.
One car won't make a difference, I think
It dies a little.
So when in the dark of the night,
I visit my conscience
And find it still breathing
I am surprised.
For, *with my own* *hands*
*_Daily, bit by bit, I kill it, I bury it...!!_*
ಆತ್ಮಸಾಕ್ಷಿ ಅಸುನೀಗುತ್ತಲಿದೆ…
ಕೆಲವೊಮ್ಮೆ ನಡುರಾತ್ರಿಯ ಕತ್ತಲಲ್ಲಿ
ನಾನು ನನ್ನ ಆತ್ಮಸಾಕ್ಷಿಯನ್ನು ಭೇಟಿ ಮಾಡುತ್ತೇನೆ;
ಅದು ಇನ್ನೂ ಜೀವಂತವಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಲು.
ಏಕೆಂದರದು ದಿನನಿತ್ಯ ನಿಧಾನಕ್ಕೆ ಸಾಯುತ್ತಲೇ ಇರುತ್ತದೆ.
ಐಷಾರಾಮಿ ಸ್ಥಳವೊಂದರಲ್ಲಿ ಒಂದು ಊಟಕ್ಕೆ ನಾನು
ಕೊಡುವ ದುಬಾರಿ ಬೆಲೆಯು
ನನಗಾಗಿ ತಿರುಗುವ ಬಾಗಿಲು ತೆರೆಯುವ
ಸಿಬ್ಬಂದಿಯ ತಿಂಗಳ ಸಂಬಳ ಎಂಬ ಯೋಚನೆ ಬಂದರೂ
ಭುಜವೇರಿಸಿ ಅದನ್ನು ಹತ್ತಿಕ್ಕುತ್ತೇನಲ್ಲ
ಆಗ ಅದು ತುಸು ಅಸುನೀಗುತ್ತದೆ…
ತಳ್ಳುಗಾಡಿಯಲ್ಲಿ ತರಕಾರಿ ಮಾರುವವನಿಂದ
ತರಕಾರಿ ಕೊಳ್ಳುವಾಗ ಅವನ ಆ ಪುಟ್ಟ ಮಗು
ನಗುತ್ತಾ ತರಕಾರಿಯನ್ನು ತೂಗುತ್ತದೆ.
ಆ ಪುಟ್ಟ ಮಗು; ಅದು ಶಾಲೆಯಲ್ಲಿ ಓದುತ್ತ ಇರಬೇಕಿತ್ತಲ್ಲ
ಎಂದು ಅನಿಸಿದಾಗ ನಾನು ಬೇರೆಡೆ ನೋಡತೊಡಗುತ್ತೇನೆ…
ಆಗ ಅದು ಇನ್ನೂ ತುಸು ಅಸುನೀಗುತ್ತದೆ…
ನಾನು ಡಿಸೈನರ್ ಉಡುಪಿನಲ್ಲಿ ಅಲಂಕೃತಗೊಂಡು;
ಅದರ ಬೆಲೆ ಒಂದು ಬಾಂಬ್ ಗೆ ತಗಲುವ ವೆಚ್ಚವಿರಿಬಹುದು.
ಚಿಂದಿ ಬಟ್ಟೆಯಲ್ಲಿ ತನ್ನ ಮಾನ ಮುಚ್ಚಿಕೊಳ್ಳಲು ಪ್ರಯತ್ನಿಸುವ
ಹೆಣ್ಣನ್ನು ನೋಡಿಯೂ ನೋಡಿಲ್ಲದಂತೆ
ನನ್ನ ಕೋಣೆಯ ಕಿಟಕಿಯನ್ನು ಮುಚ್ಚುತ್ತೇನಲ್ಲ
ಆಗ ಅದು ಮತ್ತೂ ತುಸು ಅಸುನೀಗುತ್ತದೆ.
ನನ್ನ ಮಕ್ಕಳಿಗೆ ದುಬಾರಿ ಗಿಫ್ಟ್ ಗಳನ್ನು
ಕೊಂಡು ತರುವಾಗ
ದಾರಿಯಲ್ಲಿ ಅರೆನಗ‍್ನರಾಗಿರುವ ಮಕ್ಕಳು
ಖಾಲಿ ಹೊಟ್ಟೆ ಮತ್ತು ಹಸಿದ ಕಣ್ಣರಳಿಸಿಕೊಂಡು
ಕೆಂಪುದೀಪದ ಕೆಳಗೆ ಕೂತು
ಆಟಿಕೆಗಳನ್ನು ಮಾರುತ್ತಿರುವುದನ್ನು ಕಂಡು
ಅವರಿಂದ ಕೆಲವು ಆಟಿಕೆಗಳನ್ನು ಕೊಂಡು
ನನ್ನ ಆತ್ಮಸಾಕ್ಷಿಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸಿದಾಗ
ಅದು ತುಸು ಅಸುನೀಗುತ್ತದೆ.
ಅನಾರೋಗ್ಯಪೀಡಿತ ಮನೆಕೆಲಸದಾಕೆ
ತನ್ನ ಮಗಳನ್ನು ಶಾಲೆ ತಪ್ಪಿಸಿ ಕೆಲಸಕ್ಕೆ ಕಳಿಸಿದಾಗ
ಆ ಹುಡುಗಿಗೆ ಹಿಂತಿರುಗಿ ಹೋಗಲು ನಾನು ಹೇಳಬೇಕು.
ಆದರೆ ತುಂಬಿದ ಸಿಂಕ್ ಮತ್ತು ಕೊಳೆಯಾದ ಪಾತ್ರೆಗಳನ್ನು ನೋಡಿದ ನಾನು
‘ಇದು ಕೆಲವು ದಿನಗಳವರೆಗೆ ಮಾತ್ರವಲ್ಲವೆ?’ ಎಂದುಕೊಳ್ಳುತ್ತೇನೆ
ಆಗ ಅದು ತುಸು ಅಸುನೀಗುತ್ತದೆ.
ಮಗುವೊಂದರ ಅತ್ಯಾಚಾರ ಅಥವಾ ಕೊಲೆಯ
ಸುದ್ದಿ ತಿಳಿದಾಗ ನನಗೆ ತುಂಬಾ ನೋವಾಗುತ್ತದೆ
ಆದರೂ, ಆ ಮಗು ನನ್ನದಲ್ಲವಲ್ಲ ಸದ್ಯ ಎಂದು
ಸಮಾಧಾನ ಮಾಡಿಕೊಳ್ಳುತ್ತೇನೆ;
ನಾನು ನನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಾಗದೆ.
ಆಗ ಅದು ತುಸು ಅಸುನೀಗುತ್ತದೆ.
ಜನರು ಜಾತಿ-ಮತ-ಧರ್ಮ ಗಳಿಗಾಗಿ ಹೊಡೆದಾಡುತ್ತಿರುವಾಗ
ನಾನು ಬೇಸರಗೊಳ್ಳುತ್ತೇನೆ ಮತ್ತು ಅಸಾಹಯಕನಾಗುತ್ತೇನೆ;
‘ನನ್ನ ದೇಶ ಅಧೋಗತಿಗಿಳಿಯುತ್ತಿದೆ’ ಎಂದುಕೊಳ್ಳುತ್ತೇನೆ;
ಭ್ರಷ್ಟ ರಾಜಕಾರಣಿಗಳನ್ನು ದೂಷಿಸುತ್ತೇನೆ;
ಮತ್ತು ನನ್ನೆಲ್ಲ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತೇನೆ.
ಆಗ ಅದು ತುಸು ಅಸುನೀಗುತ್ತದೆ.
ನಾನು ವಾಸಿಸುವ ನಗರದ ಗಂಟಲು ಕಟ್ಟಿಕೊಂಡಾಗ
ಹೊಗೆ ಪೀಡಿತ ಮಹಾನಗರದಲ್ಲಿ ಉಸಿರಾಡುವುದೇ ಕಷ್ಟವಾದಾಗ
ನಾನು ಪ್ರತಿನಿತ್ಯ ಕೆಲಸಕ್ಕೆ ಕಾರಿನಲ್ಲಿ ಹೋಗಿಬಂದು
ಮೆಟ್ರೋ ಬಳಸದೆ , ಕಾರ್ ಪೂಲಿಂಗ್ ಕೂಡ ಮಾಡದೆ
ನನ್ನ ಒಂದು ಕಾರಿನಿಂದಾಗಿ ಏನು ವ್ಯತ್ಯಾಸ ಆಗಿಬಿಡುತ್ತದೆಂದು ಯೋಚಿಸುತ್ತೇನಲ್ಲ
ಆಗ ಅದು ತುಸು ಅಸುನೀಗುತ್ತದೆ.
ಹಾಗಾಗಿಯೇ ನಡುರಾತ್ರಿಯ ಕಗ್ಗತ್ತಲಲ್ಲಿ
ನಾನು ನನ್ನ ಆತ್ಮಸಾಕ್ಷಿಯನ್ನು ಭೇಟಿ ಮಾಡಿದಾಗ
ಅದು ಇನ್ನೂ ಜೀವಂತವಾಗಿರುವುದನ್ನು
ಕಂಡು ನಾನು ಅಚ್ಚರಿಪಡುತ್ತೇನೆ …
ಏಕೆಂದರೆ ;
ನಾನೇ ನನ್ನ ಕೈಯಾರೆ
ಪ್ರತಿನಿತ್ಯ, ಬಿಡಿಬಿಡಿಯಾಗಿ,
ಅದನ್ನು ಕೊಲ್ಲುತ್ತೇನೆ...
ಅದನ್ನು ಹೂತು ಹಾಕುತ್ತಿದ್ದೇನೆ…
ಮೂಲ ಪದ್ಯ. : ರಾಮ್ ಜೇಠ್ಮಲಾನಿ
ಕನ್ನಡನುವಾದ : ಶಿವಕುಮಾರ್ ಮಾವಲಿ
ಏಕಾಂಗಿಯೆಂದುಕೊಳ್ಳದಿರು
ಇಡೀ ಜಗತ್ತೇ ನಿನ್ನೊಳಗಿದೆ
-ರೂಮಿ
ರೂಮಿ ಓದು
“Whenever we manage to love without expectations,
calculations, negotiations, we are indeed in heaven.”
ನಿರೀಕ್ಷೆ,
ಲೆಕ್ಕಾಚಾರ,
ನಿರ್ಬಂಧಗಳ ಮೀರಿ
ಪ್ರೀತಿಸಲು ನಮಗೆ ಸಾಧ್ಯವಾದರೆ
ನಿಜದ ಸ್ವರ್ಗ ಎಟಕುತ್ತದೆ
ರೂಮಿ ಓದು
You will learn by reading,
But you will understand with LOVE.”
ಓದಿನಿಂದ ನೀನು ಕಲಿಯಬಹುದು
ಆದರೆ,
ಪ್ರೀತಿಯಿಂದ ಅರ್ಥಮಾಡಿಕೊಳ್ಳಬಹುದು.
ರೂಮಿ ಓದು
Love is not an emotion,
it’s your very existence
ಪ್ರೇಮವೆಂದರೆ ಕೇವಲ ಭಾವವಲ್ಲ
ನಿನ್ನ ಇಡಿಯ ಅಸ್ತಿತ್ವವಾಗಿದೆ
ಸ್ನೇಹಿತರೇ,
ಅನುವಾದ ಅಭಿಯಾನ ಮುಂದುವರೆಸೋಣ...
ನಿನ್ನೆ ನಾನು ಕುಶಲಿಯಾಗಿದ್ದೆ
ಜಗವ ಬದಲಿಸಬೇಕೆಂದಿದ್ದೆ
ಇಂದು ನಾನು ವಿವೇಕಿಯಾಗಿದ್ದೇನೆ
ನಾನೇ ಬದಲಾಗಬೇಕೆಂದಿದ್ದೇನೆ
-ರೂಮಿ
ಪ್ರೇಮಿಗಳು ಕೊನೆಗೊಮ್ಮೆ
ಎಲ್ಲೋ ಭೇಟಿಯಾಗುವುದಿಲ್ಲ
ನಡೆವ ದಾರಿಯುದ್ದಕ್ಕೂ
ಒಬ್ಬರೊಳಗೊಬ್ಬರು ಸೇರಿಕೊಂಡೇ
ಇರುವರು
-ರೂಮಿ
ರೂಮಿ ಓದು
“When I am with you,
everything is prayer.”
ನಿನ್ನ ಜೊತೆಗಿರುವಾಗ
ಎಲ್ಲವೂ ಪ್ರಾರ್ಥನೆಯೆ
ರೂಮಿ ಓದು
"The heart has its own language.
The heart knows a hundred thousand ways to speak.”
ಹೃದಯಕ್ಕೆ ಅದರದೇ ಭಾಷೆಯಿದೆ
ಮಾತನಾಡಲು ನೂರಾರು ದಾರಿಗಳಿವೆ
ರೂಮಿ ಓದು
The heart is cooking a pot of food for you.
Be patient until it is cooked”
ಹೃದಯವು ಪ್ರೀತಿಯಡುಗೆಯನು ಬೇಯಿಸುತಿದೆ
ಬೆಂದು ಮುಗಿಯುವವರೆಗೆ ನೀ ಕಾಯಬೇಕಿದೆ
ರೂಮಿ ಓದು
“Love is the house of God and you are living in that house.”
ಪ್ರೇಮವೆಂದರೆ ದೇವಮಂದಿರ
ನೀನಲ್ಲಿಯೇ ವಾಸವಾಗಿರುವೆ
ನೀನು ಸೆರೆಯಲ್ಲಿರುವೆ ಯಾಕೆ?
ಬಾಗಿಲು ಪೂರ್ತಿ ತೆರೆದೇ ಇರುವಾಗ
-ರೂಮಿ
ರೂಮಿ ಓದು
“You cannot hide love
Love will get on its way
To the heart of someone you love
Far or near, it goes home
To where it belongs
To the heart of lovers”
– RUMI
ಬಚ್ಚಿಡಲಾಗದು ಪ್ರೇಮವನ್ನು
ಅದು ತನ್ನದೇ ಹಾದಿ ಹಿಡಿದು
ಪ್ರೇಮಿಸುವ ಹೃದಯವನ್ನು ತಲುಪುತ್ತದೆ
ಹತ್ತಿರವೋ, ದೂರವೋ
ಪ್ರೇಮಿಸುವ ಹೃದಯಗಳನು
ತನ್ನ ಮನೆಯಾಗಿಸಿಕೊಳ್ಳುತ್ತದೆ
ನೀನು ಕಡಲಿನೊಳಗಣ
ಒಂದು ಹನಿಯಲ್ಲ
ನೀನು ಹನಿಯೊಳಗಿರುವ
ಇಡಿಯ ಕಡಲು
- ರೂಮಿ
ರೂಮಿ ಓದು
In your light I learn how to love.
In your beauty, how to make poems.
You dance inside my chest, where no one sees you,
but sometimes I do, and that light becomes this art.”
ನಿನ್ನ ಬೆಳಕಿನಲ್ಲಿ ಪ್ರೀತಿಸಲು ಕಲಿತೆ
ನಿನ್ನ ಸೌಂದರ್ಯವೇ ನನ್ನ ಕವನಗಳಾಗಿವೆ
ನನ್ನೆದೆಯ ಹಾಡು ನೀನು
ನಿನ್ನ ಚೈತನ್ಯವೇ ಕಲೆಯಾಗಿ ಅರಳಿರಲು
ಯಾರೂ ನೋಡದ ನಿನ್ನಿರವ ನಾ ನೋಡಬಲ್ಲೆ
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"
ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು
ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"
ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ
ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"
ರವೀಂದ್ರನಾಥ ಟ್ಯಾಗೋರ್
ಗೀತಾಂಜಲಿ ೭೮
ಜಲಿಯನ್ ವಾಲಾಭಾಗ್ ನ ಗೋಡೆಯ ಸ್ವಗತದ ಭಾವಾನುವಾದ
ಮೂಲ: ನಿಶ್ತಾ ಛಾಬ್ರಾ
ಗೋಡೆ ಮತ್ತು ಪುಟ್ಟ ಮಗು
ಪುಟ್ಟ ಮಗುವಿನ ಕೈಯ್ಯೊಂದು
ಮೆಲ್ಲನೆ ನನ್ನನ್ನು ಸವರಿತು
ಚಿತ್ರದಂತಿರುವ ಕಲೆಯ ಬಣ್ಣಕ್ಕೆ ಬೆಚ್ಚಿತು
ರಕ್ತದ ಕಲೆಗಳೇಕೆ ಇಲ್ಲಿ ಮೆತ್ತಿವೆ?
ಅಚ್ಚರಿಯಿಂದ ಅಮ್ಮನನ್ನು ಕೇಳಿತು
ಅಮ್ಮ ಮಗುವಿಗೆ ಕಥೆಯೊಂದ ಹೇಳಿದಳು
ಶತಮಾನದ ಹಿಂದಿನ ಆ ದುರ್ದಿನವ ತೋರಿದಳು
ಮಗುವಿನ ಸುಂದರ ಮನದ ಕೊಳ ಕಲಕಿತು
ಎಲ್ಲೆಲ್ಲೂ ಗುಂಡಿನ ಸುರಿಮಳೆ!
ಜೀವವುಳಿಸಿಕೊಳ್ಳಲು ಓಡುವ ಜನರ ಚೀತ್ಕಾರ!
ಎದೆಯ ಗುಂಡಿಗೆಯಿಂದ ಚಿಮ್ಮಿದ ಬಿಸಿರಕ್ತ!
ಗೋಡೆಯ ತುಂಬೆಲ್ಲಾ ಕೆಂಪು ಚಿತ್ತಾರ
ಅಸಹಾಯಕ ದನಿಗಳೆಲ್ಲಾ ಉಡುಗಿಹೋದ ಮೇಲೆ
ಮತ್ತೆ ಅದೇ ನೀರವ ಮೌನ
ಗೋಡೆಯ ಮೇಲಿನ ಹಸಿರಕ್ತವೂ
ಕ್ರೌರ್ಯಕ್ಕೆ ಹೇಸಿ ಹೆಪ್ಪುಗಟ್ಟಿತ್ತು
ಕಲೆಯ ಸವರುತ್ತಿದ್ದ ಮಗುವಿನ ಕೈ ಮರಗೆಟ್ಟಿತ್ತು
ನಿಟ್ಟುಸಿರಿಟ್ಟ ಮಗು ನನ್ನ ಮೈಯ್ಯ ಸವರುತ್ತಾ ಕೇಳಿತು
" ಯಾಕೆ ನೀನು ಓಡಿಹೋಗುವವರಿಗೆ ದಾರಿಯಾಗಲಿಲ್ಲ?
ಅವರ ಹಸಿಯ ರಕ್ತ ನಿನ್ನನ್ನು ಕರಗಿಸಲಿಲ್ಲ?"
ನಿಜಕ್ಕೂ ನನ್ನೊಳಗು ಅದುರಿತು
ಅಸಹಾಯಕನಾಗಿ ಪಿಸುಗುಟ್ಟಿದೆ
"ಕ್ಷಮಿಸು ಮಗು, ನಾನೊಂದು ನತದೃಷ್ಟ ಗೋಡೆ
ಮನ ಬಂದಾಗ ನಾ ಬಯಲಾಗಲಾರೆ"
No comments:
Post a Comment